ಹನಿ ಹನಿ..
*english translation below 👇🏽 ಮೇಲಿಂದ ಕೆಳಗೆ ಇಳಿದು ಇಳೆಯ ದಾಹ ತಣಿಸುವುದೊಂದು ಹನಿ…. ಒಳಗಿಂದ ಹೊರಗೆ ಹರಿದು ದೇಹದ ಚಲನೆಯ ಕಥೆ ಹೇಳುವುದಿನ್ನೊಂದು ಹನಿ… ಒಂದು ಮಳೆಯ ಹನಿ, ಇನ್ನೊಂದು ಬೆವರ ಹನಿ… ಮಳೆಯ ಹನಿ… ಬೆವರ ಹನಿ… ಮೇಲಿಂದ ಇಳೆಗೆ, ಒಳಗಿಂದ ಹೊರಗೆ… ಎರಡು ದಾರಿಗಳು, ಎರಡು ಪಯಣಗಳು… ಒಂದು ಆಗಸದ ಮಡಿಲಿಂದ, ಇನ್ನೊಂದು ದೇಹದ ಆಳದಿಂದ… ಭುವಿಯ ಮಡಿಲು ಸೇರುವ ಮುನ್ನವೇ ದೇಹದ ಮೇಲೆಯೇ ಒಂದಾದವು! ಮಳೆಯ ಹನಿ, ಬೆವರ ಹನಿ… ಭುವಿ ಸೇರುವ ಮುನ್ನ ದೇಹದ ಮೇಲೆ ಸಂಗಮ ಅದುವೇ ಕೂಡಲ ಸಂಗಮ ! ಆಡುವಲ್ಲವೇ ಸಂತಸದ ಉಗಮ… ಮಳೆಹನಿಯ ಸಂತಸ, ಬೆವರ ಹನಿಯ ಸಂತಸ… ಕೂಡಿದಾಗ ಸಂತಸದ ಅಲೆ, ಹರಿದಾಗ ಆನಂದದ ಸೆಲೆ! #ಓಡುಸಂತೋಷಕ್ಕೆ… 🌧️🏃♂️ ಮಳೆಯ ಹನಿಯ ನಡುವೆ ಮಾಡಿದ ಒಂದು ಓಟದಿಂದ ಪ್ರೇರಿತ. https://strava.app.link/KdHmSoVju7b ### Drop by Drop… Falling from above, quenching the earth’s thirst… one drop. Flowing from within, telling the story of a body in motion… another drop. One, a raindrop. The other, a drop of sweat. Raindrop… drop of sweat… From sky to earth, from within to out… Two paths, two journeys… One from the lap of the sky, the other fro...