ಹೆಸರಿಲ್ಲದ ಚರಿತ್ರೆ - ಕಾಲಯಾನ 2025
ಒಂದು ಪ್ರೇಮಕತೆ ತೋಟದ ಮುತ್ತಜ್ಜ ಕಲ್ಲು ಚಳಿಗೆ ಮುದುಡಿ ಮಲಗಿದ್ದ ಸಮಯ ಕಾಲಯಾನದ ಗುಂಡಿ ಒತ್ತುವ ಸಮಯ ಸರಿ ಸಮಯದಲ್ಲೇ ಅಲ್ಲೇ ಎಲ್ಲೋ ಇದ್ದ ಆ ಗಂಡ ಹೆಂಡತಿ ಕಾಣುತ್ತಿಲ್ಲ ಅವನ ಶೌರ್ಯ ಏನು ಕಮ್ಮಿಯಲ್ಲ ಆದರೇನು ಬದುಕಿ ಉಳಿಯಲಿಲ್ಲ ಅಷ್ಟೇ ಅದಕ್ಕೆ ಅಲ್ಲವೇ ಊರವರೆಲ್ಲಾ ಸೇರಿ ಅವನಿಗೊಂದು ವೀರಗಲ್ಲ ಕೆತ್ತಿದ್ದು ಸಾಮಾನ್ಯರ ನಡುವಿನ ಸಾಮಾನ್ಯನೊಬ್ಬನ ಅಸಾಮಾನ್ಯ ಶೌರ್ಯ ಆಗಲಿ ಎಲ್ಲರಿಗೂ ಪ್ರೇರಣೆ ಎಂದು ತಾಳಿ ತಾಳಿ ಅದೇ ಕಲ್ಲಿಗೆ ಸೇರಿಸಿಲಿಲ್ಲವೇ ಅವನ ಸತಿಯನ್ನು . ಹೋಗಿಬಿಟ್ಟಳಲ್ಲ ಅವನ ಜೊತೆ ಪರಿ ಪರಿಯಾಗಿ ಹೇಳಲಿಲ್ಲವೇ ಊರವರೆಲ್ಲ “ಕಾಲಕ್ಕಿಂತ ದೊಡ್ಡ ಔಷಧಿಯಿಲ್ಲ” ಉಸಿರಾಗಿದ್ದವನ ಉಸಿರಿಲ್ಲದೆ ಉಸಿರಾಡಲು ಅಂತ । ಕೇಳಲಿಲ್ಲ ಅಷ್ಟೇ … ಹೊರಟೇ ಬಿಟ್ಟಳು ಹಿಂತಿರುಗಿ ನೋಡದೆ ! ಹೆಸರೂ ಗೊತ್ತಿಲ್ಲದ ಅವನು, ಅವನಿಗೆ ಉಸಿರಾದ ಅವಳು. ಇನ್ನು ನಿಂತಿದ್ದಾರೆ ಅಂದಿನಿಂದ-ಇಂದಿನವರೆಗೆ, ಬಹುಶಹ ಎಂಟು ಶತಮಾನಗಳಿಂದ ಇತ್ತೀಚೆಗೆ, “ಕೋಲೆ ಬಸವ”ನೂ ಸೇರಿಕೊಂಡಿದ್ದಾನೆ ಅವರೆಲ್ಲ ಕತೆಗಳಿಗೆ ಮೂಕ ಸಾಕ್ಷಿಯಂತೆ, ಎಲ್ಲವನ್ನೂ ಕೇಳುತ್ತಾ, ನೋಡುತ್ತಾ ಯಾರಿಗೂ ಹೇಳಲಾಗದ ಕತೆಯನ್ನೇ ಮೆಲಕು ಹಾಕುತ್ತಾ ಇರಲಿ ಇವರದೊಂದು ಶೌರ್ಯದ ಪ್ರೇಮಕತೆ ನಮ್ಮ ಜೊತೆ !! ಹೆಸರಿನ...